ಎನಂತ ನಾ ಬಣ್ಣಿಸಲಿ....
ಸವಿನೆನಪು ಆ ದಿನಗಳು
ಆರಂಭದ ಅಳುಕು ಬಳುಕಿನ ಹೆಜ್ಜೆಗಳು
ಮರೆಯಲೆಣಿಸಲು ಸಾಧ್ಯವೇ....
ನಿಮ್ಮಗಳ ಜೋತೆ ಹೋಗಲೆನಿಸುತಿದೆ ಇನ್ನೊಮ್ಮೆ
ನಮ್ಮ ಪ್ರೀತಿಯ ಕಾಲೇಜ ನೋಡಲು....
ಕಾಲೇಜಿನ ಸುತ್ತ ಮಿರು ಮಿರುಗುವ ಬಣ್ಣಗಳ ಕಣ್ಣೆತ್ತಿ ಮಿಸುಕಾಡಲು
ನಾ ಬೇಕು ಎಂದರು ನೀ ಒಲ್ಲೆ ಎಂದೆಯ ಗೆಳೆಯ
ಎಷ್ಟೇ ಯತ್ನಿಸಿದರು ನಮ್ಮತ್ತ ನೋಡಲಿಲ್ಲ ಒಂದು ಮರಿ ಜಿಂಕೆ..
ಎನು ಮಾಡೋದು.. ಪಲ್ಸರ್ ಸ್ಪ್ಲೆಂಡರ್‍ಗಳ ಮಧ್ಯೆ ನಮ್ಮ ಕೈಕಾಲಿಗೆ ಬೆಲೆಯಲ್ಲಿ...
ನಿಮ್ಮಗಳ ಜೋತೆ ಹೋಗಲೆನಿಸುತಿದೆ ಇನ್ನೊಮ್ಮೆ
ನಮ್ಮ ಪ್ರೀತಿಯ ಕಾಲೇಜ ನೋಡಲು....
ಕಿಸೆಯೆಲ್ಲಾ ಖಾಲಿ ತಿಂಗಳತ್ಯಕ್ಕೆ....
ಮೂರೋತ್ತು ಗಂಜಿ ಉಪ್ಪಿನ ಕಾಯಿ
ಬಾಯಲ್ಲಿ ಒಂದೇ ಮಂತ್ರ.....ಕಾಸುಂಡ, ದುಡ್ಡಿದೆಯ
ತಪಿಸಿದರು ಬಾರದು....ಆ ದಿನಗಳು....
ನಿಮ್ಮಗಳ ಜೋತೆ ಹೋಗಲೆನಿಸುತಿದೆ ಇನ್ನೊಮ್ಮೆ
ನಮ್ಮ ಪ್ರೀತಿಯ ಕಾಲೇಜ ನೋಡಲು....
ದುಡ್ದಿದ್ದಾಗ ನಾ ದೊಡ್ದಪ್ಪ....
ಎನ್ ಕೇಳ್ತಿಯ.... ಮುಟ್ಟ ಪರೋಟ, ಸಮೋಸ ಬ್ರೆಡ್, ಎಗ್ಗ್ ಒಮ್ಲೆಟ್.... ಇತ್ಯಾದಿ ಇತ್ಯಾದಿ...
ಸಾಲದು ಗೆಳೆಯ.... ಸಂಜೆಯ ಆ ದಾಪುಕಾಲು ನಮ್ಮ ಪ್ರೀತಿಯ ರತ್ನ ಟಾಕೀಸಿನ ಕಡೆಗೆ...
ದೊಡ್ದಪ್ಪ ಚಿಕ್ಕಪ್ಪ ಆದಾಗ... ಮೂರೊತ್ತು ಅದೇ ಅಮ್ಮ ಕಳಿಸಿದ ಗಂಜಿ ಉಪ್ಪಿನ ಕಾಯಿ..
ನಿಮ್ಮಗಳ ಜೋತೆ ಹೋಗಲೆನಿಸುತಿದೆ ಇನ್ನೊಮ್ಮೆ ನಮ್ಮ ಪ್ರೀತಿಯ ಕಾಲೇಜ ನೋಡಲು....
ಇಂಟರ್ನಲ್ಸ್ ಗೆ ಮಾಡಿದ ಆ ಕಾಪಿ ಚಿಟ್, ಮೈಕ್ರೊ ಜೆರಾಕ್ಸ್
ಕ್ಲಾಸಿನಲ್ಲಿ ನಾಲ್ಕೆ ಜನ ಆದರೂ.. ನಿಂಗೊಸ್ಕರ ನಾ ಕೊಟ್ಟೆ ಪ್ರಾಕ್ಷಿ
ಎಕ್ಷಾಮ್ ಮುಂಚೆ ನೈಟ್ ಔಟ್ ಡೇ ಔಟ್...
ಎಲ್ಲದಕ್ಕು ಸಾಂತ್ವನ...ಊರ ಹೊರಡೊ ಮುಂಚಿನ...ಚಾಮುಂಡಿ ತಾಯಿಯ ದರುಶನ..
ನಿಮ್ಮಗಳ ಜೋತೆ ಹೋಗಲೆನಿಸುತಿದೆ ಇನ್ನೊಮ್ಮೆ ನಮ್ಮ ಪ್ರೀತಿಯ ಕಾಲೇಜ ನೋಡಲು....